ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆ ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ ಭರ್ಗಾದಿಗಳಿಗೆಲ್ಲ ಗುಣಿಸಿದರೂ ಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿ ವರ್ಗಕ್ಕೆ ಮೀರಿದ ಬಲು ಸುಂದರೀ ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ ದುರ್ಗತಿಹಾರೆ ನಾನು ಪೇಳುವುದೇನು ದುರ್ಗಂಧವಾಗಿದೆ ಸಂಸೃತಿ ನೋಡಿದರೆ ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ ದುರ್ಗೆ ಹೆ ದುರ್ಗೆ ಮಹಾ ದುರ್ಗೆ ಭೂದುರ್ಗೆ ವಿಷ್ಣು ದುರ್ಗೆ ದುರ್ಜಯ ದುರ್ಧಕ್ಷೆ ಶಕ್ತಿ ದುರ್ಗಕಾನನ ಗಹನ ಪರ್ವತಘೋರ ಸರ್ಪ ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ ದುರ್ಗಣ ಸಂಕಟ ಪ್ರಾಪ್ತವಾಗೆ ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ ನಿರ್ಗಳಿತವಾಗಿ ಒಮ್ಮೆ ಕೂಗಿದರೂ ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ ಸುರ್ಗಣ ಜಯ ಜಯವೆಂದು ಪೊಗಳುತಿರೆ ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ ನಿರ್ಗುಡಿದಂತೆ ಲೋಕ ಲೀಲೆ ನಿನಗೆ ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ ದುರ್ಗಾಶ್ರಮ ಮಾಡಿ ಬದುಕುವಂತೆ ಮಾಡು
An invocation to Durga — destroyer of the wicked, dwelling within as the fortress, hard to attain yet easy to the devoted. Her glory is beyond Brahma and Rudra; she pervades heaven, earth and the nether world. Call out her names — Durga, Mahadurga, Bhudurga, Vishnu-Durga — against forests, mountains, snakes, tigers, ghosts and all afflictions, and take refuge at Vijaya Vittala's feet.
Verse 2 — ಅರಿದರಾಂಕುಶ ಶಕ್ತಿ ಪರಶು ನೇಗಲಿಖಡ್ಗ ಸರಸಿಜ ಗದೆ…
ಅರಿದರಾಂಕುಶ ಶಕ್ತಿ ಪರಶು ನೇಗಲಿಖಡ್ಗ ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ ವರ ಅಭಯ ಮುಸಲ ಪರಿ ಪರಿ ಆಯುಧವ ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ ಸರುವ ದೇವತೆಗಳ ಕರುಣಾಪಾಂಗದಲ್ಲಿ ನಿರೀಕ್ಷಿಸಿ ಅವರವರ ಸ್ವರೂಪ ಸುಖಕೊಡುವ ಸಿರಿಭೂಮಿ ದುರ್ಗಾ ಸರ್ವೋತ್ತಮ ನಮ್ಮ ವಿಜಯ ವಿಠ್ಠಲನಂಘ್ರಿ ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ
She shines bearing many weapons — goad, axe, sword, bow, mace and club — watched with compassion by Lakshmi, Brahma, Rudra and all the gods, granting each their own blissful nature. Remember with deep devotion the world's mother, supreme over all.
Verse 3 — ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉನ್ನತ ಬಾಹು…
ಸ್ತುತಿ ಮಾಡುವೆ ನಿನ್ನ ಕಾಳಿ ಮಹಾಕಾಳಿ ಉನ್ನತ ಬಾಹು ಕರಾಳವದನೆ ಚಂದಿರೆ ಮುಖೆ ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೇ ಭವ್ಯೇ ಚತುರಷ್ಟ ದ್ವಿಹಸ್ತೆ ಹಸ್ತಿ ಹಸ್ತಿ ಗಮನೆ ಅದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ ಕ್ಷಿತಿಭಾರಹರಣೆ ಕ್ಷೀರಾಬ್ಧಿ ತನಯೆ ಸದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ ದಿತಿ ಜಾತೆ ನಿಗ್ರಹೆ ನಿರ್ಧೂತ ಕಲ್ಮಷೆ ಪ್ರತಿಕೂಲ ಭೇದೆ ಪೂರ್ಣಬೋಧೆ ರೌದ್ರೇ ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ ಜಿತಕಾಮೆ ಜನನ ಮರಣ ರಹಿತ ಖ್ಯಾತೆ ಘೃತ ಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸುವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ ಶತಪತ್ರ ನಯನೆ ನಿರುತಕನ್ಯೇ ಉದಯಾರ್ಕ ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ ಶ್ರುತಿತತಿನುತೆ ಶುಕ್ಲ ಶೋಣಿತ ರಹಿತೆ ಅಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ ಚತುರ ಕಪರ್ದಿಯೆ ಅಂಭರಣಿ ಹ್ರೀ ಉತ್ಪತ್ತಿ ಸ್ಥಿತಿಲಯ ಕರ್ತೆ ಶುಭ್ರಶೋಭನ ಮೂರ್ತೆ ಪತಿತಪಾವನೆ ರನ್ನೆ ಸರ್ವೋಷಧಿಯಲಿದ್ದು ಹತಮಾಡು ಕಾಡುವ ರೋಗಗಳಿಂದ ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿಯಿತ್ತು ಸತತ ಕಾಯಲಿ ಬೇಕು ದುರ್ಗೇ ದುರ್ಗೇ ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ
I praise you — Kali, Mahakali, moon-faced, many-formed, auspicious, two-armed, wondrously mighty, dweller of the forest, daughter of the milk-ocean, Lakshmi, Indira, Rama, the fierce one with blood-red tongue and jewel garlands, three-eyed, lotus-eyed. Destroy the diseases that torment, grant the wisdom to live in joy, and guard us ever, O Durga.
ಶ್ರೀಲಕ್ಷ್ಮೀಕಮಲಾ ಪದ್ಮಾಪದ್ಮಿನಿ ಕಮಲಾಲಯೆ ರಮಾ ವೃಷಾಕಪಿ ಧನ್ಯಾವೃದ್ಧಿವಿಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿವಾಲಯ ಸತ್ಯ ನಿತ್ಯಾನಂದ ತ್ರಯಿ ಸುಧಾ ಶೀಲೆ ಸುಗಂಧ ಸುಂದರಿ ವಿದ್ಯಾಸುಶೀಲೆ ಸುಲಕ್ಷಣ ದೇವಿ ನಾನಾ ರೂಪಂಗಳಿಂದ ಮೆರೆವ ಮೃತ್ಯುನಾಶೆ ವಾಲಗಕೊಡು ಸಂತರ ಸನ್ನಿಧಿಯಲ್ಲಿ ಕಾಲ ಕಾಲಕೆ ಎನ್ನ ಭಾರ ವಹಿಸುವ ತಾಯಿ ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು ಕೇಳಿ ಕೇಳಿ ಬಂದೆ ಕೇವಲ ಈ ಮನ ಘಾಳಿಯಂತೆ ಪರದ್ರವ್ಯಕ್ಕೆ ಪೊಪುದು ಏಳಲ ಮಾಡದೆ ಉದ್ಧಾರ ಮಾಡುವ ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ ಪಾಲಸಾಗರಶಾಯಿ ವಿಜಯ ವಿಠ್ಠಲನೊಳು ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ
Lakshmi in myriad forms — Kamala, Rama, Indira, of noble conduct and many names, destroyer of death. Grant audience to the saints, bear my burden time and again, O mother whose fame I heard and came to. Primal nature, worshipped in Kailasa, sporting with Vijaya Vittala, the fully adorned one.
Verse 5 — ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂತಾಪವ ಕೊಡುತಿಪ್ಪ…
ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ ತಪತ್ರಯ ವಿನಾಶ ಓಂಕಾರೆ ಹೂಂಕಾರೆ ಪಾಪಿ ಕಂಸಗೆ ಭಯ ತೋರಿದೆ ಬಾಲ ಲೀಲೆ ವ್ಯಾಪುತ ಧರ್ಮಮಾರ್ಗ ಪ್ರೇರಣೆ ಅಪ್ರಾಕೃತೆ ಸ್ವಾಪದದಲಿ ನಿನ್ನ ನೆನೆಸಿದ ಶರಣನಿಗೆ ಅಪಾರವಾಗಿದ್ದ ವಾರಿಧಿಯಂತೆ ಮಹಾ ಆಪತ್ತು ಬಂದಿರಲು ಹಾರೆ ಪೋಗೋವು ಸಪ್ತ ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳ ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ ಆಪಾದ ಮೌಳಿತನಕ ಭಜಿಸಿ ಭವ್ಯರಾದರು ನಾ ಪೇಳುವದೇನು ಪಾಂಡವರ ಮನೋಭಿಷ್ಟೆ ಈ ಪಂಚ ಭೌತಿಕದಲ್ಲಿ ಆವ ಸಾಧನೆ ಕಾಣೇ ಶ್ರೀಪತಿ ನಾಮ ಒಂದೇ ಜಿಹ್ವಾಗ್ರದಲಿ ನೆನೆವ ಔಪಾಸನ ಕೊಡು ರುದ್ರಾದಿಗಳ ವರದೇ ತಾಪಸ ಜನಪ್ರೀಯ ವಿಜಯವಿಠ್ಠಲ ಮೂರ್ತಿಯ ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾ ವರ್ಣಿಶ್ರಯೆ
O liberator who strikes fear into demons, destroyer of the three afflictions, who frightened Kamsa as a child. You ferry across the ocean of calamity like a bridge, stepping-stone of merit for devotees. Keep but one name of Śrīpati on the tongue, grant worship, and take refuge at the feet of Vijaya Vittala's form, O Śrī Bhū Durgā.
Durgā Sulādi is a Kannada devaranama, composed by Śrī Vijaya Dāsaru, addressed to Durga — a Suladi. It is presented here in Devanagari, Roman (IAST), Kannada, Telugu, Tamil, each verse with its English meaning. Source text: madhwafestivals.com.
Also known as: Durga Suladi.
A leading Haridāsa saint who revived the Dāsakūṭa in the eighteenth century and initiated a lineage that included Gopāla Dāsaru and Jagannātha Dāsaru; composer of a vast body of padas, suḷādis and ugābhogas under the signature "Vijaya Viṭhala".
Durgā Sulādi is a Kannada devaranama (devotional hymn), composed by Śrī Vijaya Dāsaru, addressed to Durga, of 6 verses. On Avabodhak every verse is shown with its English meaning, so you can understand the text line by line as you read.
How do I pronounce Durgā Sulādi correctly?
Avabodhak presents Durgā Sulādi in Devanagari, Roman (IAST), Kannada, Telugu, Tamil alongside IAST Roman transliteration that marks every long vowel (ā, ī, ū) and conjunct consonant. Reading the Devanagari text with the IAST line lets you follow the exact pronunciation syllable by syllable, and the guided practice mode replays it line by line.
What is the word-by-word meaning of Durgā Sulādi?
Avabodhak pairs each verse of Durgā Sulādi with its English meaning, and the practice view breaks lines into individual words — so you learn what each word means, not just the overall sense.
Who composed Durgā Sulādi?
Durgā Sulādi is attributed to Śrī Vijaya Dāsaru.
In which scripts can I read Durgā Sulādi?
Durgā Sulādi is available in Devanagari, Roman (IAST), Kannada, Telugu, Tamil on Avabodhak, each with English meaning and IAST transliteration.
Can I chant or practice Durgā Sulādi online?
Yes — Avabodhak offers a free reading view plus guided practice and word-puzzle modes to help you chant and memorise Durgā Sulādi.