Avabodhak

Madhwanama

Kannada lyrics with meaning · composed by Śrī Śrīpādarāja (Śrīpādarāya) · nama · 29 verses

Open in Avabodhak — read, chant & practice →
Also available in: DevanagariRoman (IAST)

ಮಧ್ವ ನಾಮ

ಮಧ್ವ ನಾಮ
madhva nāma

Verse p — ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಲಗುಣ ಸದ್ಧಾಮ…

ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ ಅಖಿಲಗುಣ ಸದ್ಧಾಮ ಮಧ್ವನಾಮ
jaya jaya jagatrāṇa jagadoḷage sutrāṇa akhilaguṇa saddhāma madhvanāma
Victory, victory to the name of Madhva — the thread that holds the universe together, the abode of all virtues.

Verse 1 — ಆವ ಕಚ್ಛಪ ರೂಪದಿಂದಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು…

ಆವ ಕಚ್ಛಪ ರೂಪದಿಂದಲಂಡೋದಕವ ಓವಿ ಧರಿಸಿದ ಶೇಷಮೂರುತಿಯನು ಆವವನ ಬಳಿವಿಡಿದು ಹರಿಯ ಸುರರೈಯ್ದುವರು ಆ ವಾಯು ನಮ್ಮ ಕುಲಗುರುರಾಯನು
āva kacchapa rūpadiṃdaḷaṃḍōdakava ōvi dharisida śēṣamūrutiyanu āvavana baḷiviḍidu hariya suraraiyyuvaru ā vāyu namma kulagururāyanu
He who in the form of the tortoise supported the earth, who holds the cosmic waters, who bears the serpent Śeṣa upon whom Viṣṇu reclines — that Vāyu is our family guru and king.

Verse 2 — ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ…

ಆವವನು ದೇಹದೊಳಗಿರಲು ಹರಿ ನೆಲಸಿಹನು ಆವವನು ತೊಲಗೆ ಹರಿ ತಾ ತೊಲಗುವ ಆವವನು ದೇಹದಾ ಒಳ ಹೊರಗೆ ನಿಯಾಮಕನು ಆ ವಾಯು ನಮ್ಮ ಕುಲಗುರುರಾಯನು
āvavanu dēhadolagiralu hari nelasihanu āvavanu tolage hari tā tolaguva āvavanu dēhada ā oḷa horage niyāmakanu ā vāyu namma kulagururāyanu
When Vāyu dwells within the body, Hari resides there; when Vāyu departs, Hari departs too. He is the inner and outer controller of the body — that Vāyu is our family guru and king.

Verse 3 — ಕರುಣಾಭಿಮಾನಿ ಸುರರು ದೇಹವ ಬಿಡಲು ಕುರುಡ ಕಿವುಡ…

ಕರುಣಾಭಿಮಾನಿ ಸುರರು ದೇಹವ ಬಿಡಲು ಕುರುಡ ಕಿವುಡ ಮೂಕನೆಂದೆನಿಸುವ ಪರಮ ಮುಖ್ಯ ಪ್ರಾಣ ತೊಲಗಲಾ ದೇಹವನು ಅರಿತು ಪೆಣನೆಂದು ಪೇಳುವರು ಬುಧಜನ
karuṇābhimāni suraru dēhava biḍalu kuruḍa kivuḍa mūkanendenisuva parama mukhya prāṇa tolagalā dēhavanu aritu peṇanendu pēḷuvaru budhajana
When the gods of compassion leave the body, one becomes blind, deaf, and mute; when the supreme vital breath departs, the body is known to be mere matter — so declare the wise.

Verse 4 — ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ ಪರತರನೆನಿಸಿ…

ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ ಪರತರನೆನಿಸಿ ನಿಯಾಮಿಸಿ ನೆಲಸಿಹ ಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳು ಗುರುಕುಲತಿಲಕ ಮುಖ್ಯ ಪವಮಾನನು
surarolage nararolage sarvabhūtagalolage parataranenisi niyāmisi nelasiha hariyanallade bageya anyaranu lōkadoḷu gurukulatilaka mukhya pavamānanu
Dwelling among the gods, among humans, among all beings, he is the supreme lord who governs and abides. Apart from Hari there is none other in all the worlds — he is the crest-jew of the guru lineage, the foremost Vāyu.

Verse 5 — ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು ವಾತಸುತ…

ತ್ರೇತೆಯಲಿ ರಘುಪತಿಯ ಸೇವೆ ಮಾಡುವೆನೆಂದು ವಾತಸುತ ಹನುಮಂತನೆಂದೆನಿಸಿದ ಪೋತ ಭಾವದಿ ತರಣಿ ಬಿಂಬಕ್ಕೆ ಲಂಘಿಸಿದ ಈತಗೆಣೆಯಾರು ಮೂಲೋಕದೊಳಗೆ
trētēyali raghupatiya sēve māḍuvenendu vātasuta hanumantanendenisida pōta bhāvadi taraṇi bimbakke laṅghisida ītagēṇēyāru mūlōkadolage
In the Tretā Yuga, born as Hanuman the son of Vāyu, he declared he would serve Rāma; crossing the ocean in a humble boat-like form, who else in all the worlds is his equal?

Verse 6 — ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ ಧರಣಿಸುತೆಯಳ…

ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿ ಧರಣಿಸುತೆಯಳ ಕಂಡು ಧನುಜರೊಡನೆ ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ ಉರುಹಿ ಲಂಕೆಯ ಬಂದ ಹನುಮಂತನು
taraṇisutanunu kāydu śaradhiyanu nerēdāṭi dharaṇisuteyaḷa kaṇḍu dhanujarōḍane bharadi raṇavane māḍi gelidu divyāstragaḷa uruhi laṅkeya banda hanumantanu
Protecting the son of the sun (Aṅgada), crossing the vast ocean, finding the daughter of the earth (Sītā) and with the warrior monkeys, waging fierce battle and conquering by hurling divine weapons, Hanuman came to Laṅkā.

Verse 7 — ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ ಶರಧಿಯನು ಕಟ್ಟಿ…

ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ ಶರಧಿಯನು ಕಟ್ಟಿ ಬಲು ರಕ್ಕಸರನು ಒರಸಿ ರಣದಲಿ ದಶಶಿರನ ಹುಡಿಗುಟ್ಟಿದ ಮೆರೆದ ಹನುಮಂತ ಬಲವಂತ ಧೀರ
harige cūḍāmaṇiyanittu harigaḷ kūḍi śaradhiyanu kaṭṭi balu rakkasanu orasi raṇadali daśaśirana huḍiguṭṭida mereda hanumanta balavanta dhīra
Presenting the Chūḍāmaṇi (crest-jew) to Rāma, uniting with the monkeys, bridging the ocean, slaying many demons, and in battle wounding the ten-headed Rāvaṇa — mighty and valiant Hanuman shone forth.

Verse 8 — ಉರಗಬಂಧಕೆ ಸಿಲುಕಿ ಕಪಿವರರು ಮೈಮರೆಯೆ…

ಉರಗಬಂಧಕೆ ಸಿಲುಕಿ ಕಪಿವರರು ಮೈಮರೆಯೆ ತರಣಿಕುಲತಿಲಕನಾಜ್ಞೆಯ ತಾಳಿದ ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ ಹರಿವರಗೆ ಸರಿಯುಂಟೆ ಹನುಮಂತಗೆ
uragabandhake siluki kapivararu maimareye taraṇikulatilakanājñēya tāḷida girisahita sañjīvanava kittu tadditta harivarage sariyuṇṭe hanumantage
When the best of monkeys were trapped by the serpent's coils and lost their wits, he who honored the command of the crown-jew of the solar dynasty brought back the mountain with the life-giving herb — is there anyone equal to Hanuman?

Verse 9 — ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ ಭಜಿಸಿ…

ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ ಭಜಿಸಿ ಮೌಕ್ತಿಕದ ಹಾರವನು ಪಡೆದ ಅಜಪದವಿಯನು ರಾಮ ಕೊಡೆವೆನೆನೆ ಹನುಮಂತ ನಿಜ ಭಕುತಿಯನೆ ಬೇಡಿ ವರವ ಪಡೆದ
vijaya raghupati mecci dharaṇisuteyaḷigīye bhajisi mauktikada hāravanu paḍeda ajapadaviyanu rāma koḍevenene hanumanta nija bhaktiyanē beḍi varava paḍeda
Rāma, pleased with the victory and with Sītā, worshipped him and offered a pearl necklace; when Rāma offered the kingdom, Hanuman begged only for pure devotion and obtained that boon.

Verse 10 — ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮಕುಲದಲಿ ಜನಿಸಿ…

ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮಕುಲದಲಿ ಜನಿಸಿ ಪಾರ್ಥನೊಡನೆ ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದ ಆ ಮಹಿಮ ನಮ್ಮ ಕುಲಗುರುರಾಯನು
ā mārutanē bhīmanenisī dvāparadalli sōmakuladali janisi pārthanoḍane bhīma vikrama rakkasara muridoṭṭida ā mahima namma kulagururāyanu
That same Vāyu, born as Bhīma in the Dvāpara Yuga in the lunar dynasty, fought alongside Arjuna and smashed the demons with fearsome valor — that glory belongs to our family guru and king.

Verse 11 — ಕರದಿಂದ ಶಿಶುಭಾವನಾದ ಭೀಮನ ಬಿಡಲು ಗಿರವಡಿದು…

ಕರದಿಂದ ಶಿಶುಭಾವನಾದ ಭೀಮನ ಬಿಡಲು ಗಿರವಡಿದು ಶತಶೃಂಗವೆಂದೆನಿತು ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ ಅರೆವ ವೀರರಿಗೆ ಸುರ ನರರು ಸರಿಯೇ
karadiṃda śiśubhāvanāda bhīmana biḍalu giravaḍidu śataśṛṅgavendenitu harigaḷ harigaḷiṃ karigaḷ karigaḷiṃ arēva vīrarige sura nararu sariyē
Lifting with one hand the infant Bhīma and slaying the demon carrying a hundred fortresses — among heroes, among gods and humans, is there any equal to this Vāyu?

Verse 12 — ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ ಹಸಿದುರಗಗಳ…

ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ ಹಸಿದುರಗಗಳ ಮ್ಯಾಲೆ ಬಿಡಲದನೊರಸಿದ ಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರ ಧರಿಸಿ ಜಾಹ್ನವಿಗೊಯ್ದ ತನ್ನನುಜರ
kuru pa garalavanikke nere uṇḍu tēgi hasiduragagaḷ myāle biḍaladanorasida araginaramaneyalli uriyanikkalu vīra dhariśi jāhnavigoyda tannanujara
The strong one drank the poison at the churning, vomiting fire upon the hungry horses, and the brave companion carried the fiery one to the Ganges — such is the servant of Madhva.

Verse 13 — ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ ನಿಲ್ಲದೊರಸಿದ…

ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ ನಿಲ್ಲದೊರಸಿದ ಲೋಕಕಂಟಕರನು ಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದು ಎಲ್ಲ ಸುಜನರಿಗೆ ಹರುಷವ ತೋರಿದ
allirda baka hiḍiṃbakarēṃba rakkasara nil lado rasida lōkakaṇṭakaranu ballidasurara gelidu draupadiya kaiviḍidu ella sujanarige haruṣava tōrida
There he slew the demons Bakā and Kīcaka and other tormentors of the world, defeated the powerful demons, and protected Draupadī — bringing joy to all good people.

Verse 14 — ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ ರಾಜಸೂಯಾಗವನು…

ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿ ರಾಜಸೂಯಾಗವನು ಮಾಡಿಸಿದನು ಆಜಿಯೊಳು ಕೌರವರ ಬಲವ ಸವರುವೆನೆಂದು ಮೂಜಗವರಿಯೆ ಕಂಕಣ ಕಟ್ಟಿದ
rājakula vajranenisida māgadhana sīḷi rājasūyāgavanu māḍisidanu ājiyoḷu kauravara balava savaruvēnendu mūjagavariyē kaṅkaṇa kaṭṭida
Splitting the mace of Jarāsandha, the thunderbolt of the Kuru lineage, he performed the Rājasūya sacrifice; declaring he would subdue the Kaurava army in battle, he bound the armlet (took the vow).

Verse 15 — ದಾನವರ ಸವರಬೇಕೆಂದು ಬ್ಯಾಗ ಮಾನನಿಧಿ ದ್ರೌಪದಿಯ…

ದಾನವರ ಸವರಬೇಕೆಂದು ಬ್ಯಾಗ ಮಾನನಿಧಿ ದ್ರೌಪದಿಯ ಮನದಿಂಗಿತವನರಿತು ಕಾನನವ ಪೊಕ್ಕು ಕಿಮ್ಮಾರಾದಿಗಳ ಮುರಿದು ಮಾನಿನಿಗೆ ಸೌಗಂಧಿಕವನೆ ತಂದ
dānavara savarabēkēndu byāga mānanidhi draupadiya manadimgitavanaritu kānanava pokku kimmārādigala muridu māninige saugandhikavanē tanda
To vanquish the demons, understanding the desire of the noble Draupadī, he went to the forest, subdued the Kinnaras and others, and brought her the fragrant Saugandhika flower.

Verse 16 — ದುರುಳ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ ಮರುಳಾಗಿ…

ದುರುಳ ಕೀಚಕನು ತಾ ದ್ರೌಪದಿಯ ಚೆಲುವಿಕೆಗೆ ಮರುಳಾಗಿ ಕರಕರಿಯ ಮಾಡಲವನಾ ಗರಡಿ ಮನೆಯಲಿ ಬರಸಿ ಅವನನ್ವಯವ ಕುರುಪನಟ್ಟಿದ ಮಲ್ಲಕುಲವ ಸದೆದ
duruḷa kīcakanu tā draupadiya celuvikege maruḷāgi karakariya māḍalavanā garaḍi maneyali barasi avananvayava kurupanaṭṭida mallakulava sadeda
The wicked Kīcaka, infatuated with Draupadī's beauty, harassed her; in the wrestling arena he crushed him and his kinsmen, destroying the entire clan of wrestlers.

Verse 17 — ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ ಓರಂತೆ ಕೌರವನ…

ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ ಓರಂತೆ ಕೌರವನ ಮುರಿದು ಮೆರೆದ ವೈರಿ ದುಶ್ಶಾಸನ್ನ ರಣದಲ್ಲಿ ಎಡಗೆಡಹಿ ವೀರ ನರಹರಿಯ ಲೀಲೆಯ ತೋರಿದ
kauravara bala savari vairigala neggotti ōrantē kauravana muridu mereda vairi duśśāsanna raṇadali eḍageḍahi vīra narahariya līleya tōrida
Subduing the Kaurava army and crushing the enemies, he broke Duryodhana and shone in battle; splitting open the enemy Duḥśāsana in the battlefield, he revealed the divine sport of the hero Nārāyaṇa.

Verse 18 — ಗುರುಸುತನು ಸಂಗರದಿ ನಾರಾಯಣಾಸ್ತ್ರವನು ಉರವಣಿಸಿ ಬಿಡಲು…

ಗುರುಸುತನು ಸಂಗರದಿ ನಾರಾಯಣಾಸ್ತ್ರವನು ಉರವಣಿಸಿ ಬಿಡಲು ಶಸ್ತ್ರವ ಬಿಸುಟರು ಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಿಂ ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ
gurusutanu saṅgaradi nārāyaṇāstravanu uravaṇisi biḍalu śastrava bisuṭaru harikṛpeya paḍedirdda bhīma huṃkāradim hariya divyāstravanu neṛe aṭṭida
In battle, when the guru's son released the Nārāyaṇa weapon and they counter-fired their own weapons, Bhīma, graced by Hari's mercy, roared and deflected Hari's divine weapon.

Verse 19 — ಚಂಡ ವಿಕ್ರಮನು ಗದೆಗೊಂಡು ರಣದಿ ಭೂ ಮಂಡಲದೊಳಿದಿರಾಂತ…

ಚಂಡ ವಿಕ್ರಮನು ಗದೆಗೊಂಡು ರಣದಿ ಭೂ ಮಂಡಲದೊಳಿದಿರಾಂತ ಖಳರನೆಲ್ಲಾ ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು ಕಂಡು ನಿಲ್ಲುವರಾರು ತ್ರಿಭುವನದೊಳು
caṇḍa vikramanu gadaegoṇḍu raṇadi bhū maṇḍaladoḷidirānta khaḷaranellā hiṇḍi bisuṭiha vr̥kōdarana pratāpavanu kaṇḍu nilluvarāru tribhuvanadoḷu
Seizing his mace with fierce valor and sweeping away all the villains across the earth in battle — who in the three worlds can stand and witness the might of Vrkodara (Bhīma)?

Verse 20 — ದಾನವರು ಕಲಿಯುಗದೊಳವತರಿಸಿ ವಿಬುಧರೊಳು ವೇನನ…

ದಾನವರು ಕಲಿಯುಗದೊಳವತರಿಸಿ ವಿಬುಧರೊಳು ವೇನನ ಮತವನರುಹಲದನರಿತು ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ ಮಾನನಿಧಿ ಮಧ್ವಾಖ್ಯನೆಂದೆನಿಸಿದ
dānavaru kaliyugadoḷavatariṣi vibudharoḷu vēnana matavanaruhaladanaritu jñāni tā pavamāna bhūtalaḍoḷavatariṣi mānanidhi madhvākhyanenedenisida
When the demons descended in the Kali Yuga among the learned and could not defeat Veda Vāyana's philosophy, the wise one, the Wind-God, descended upon the earth and became known as the treasure of honor, Madhva.

Verse 21 — ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ ನಿರ್ಭಯದಿ ಸಕಳ…

ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ ನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದ ಉರ್ವಿಯೊಳು ಮಾಯೆ ಬೀರಲು ತತ್ತ್ವಮಾರ್ಗವನು ಓರ್ವ ಮಧ್ವಮುನಿ ತೋರ್ದ ಸುಜನರ್ಗೆ
arbhakatanadoḷaidi badariyali madhvamuni nirbhayadi sakaḷa śāstrava paṭisida urviyoḷu māyē bīralu tattvamārgavanu ōrva madhvamuni tōrda sujanarge
Born in childhood at Badari, the Madhva muni fearlessly studied all the scriptures; to dispel the illusion (māyā) upon earth, the Madhva muni revealed the path of truth to the good.

Verse 22 — ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ ದುರ್ವಾದಿಗಳ…

ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ ದುರ್ವಾದಿಗಳ ಮತವ ನೆರೆ ಖಂಡಿಸಿ ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದಾ ಶರ್ವಾದಿ ಗೀರ್ವಾಣ ಸಂತತಿಯಲಿ
sarvēśa hari viśva ella tā pusiyēṃba durvādigala matava neṛe khaṇḍisi sarvēśa hari viśva satyavēndaruhidā śarvādi gīrvāṇa santatiyali
He who is the Lord of all, Hari, who holds the entire universe as a mere trifle — demolishing the doctrines of the Dvaita-opponents (Durvāsādi schools), he proclaimed that Hari is the supreme truth, established among the lineage of Brahmā and Śiva.

Verse 23 — ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ ಪದಕೆರಗಿ ಅಖಿಳ…

ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ ಪದಕೆರಗಿ ಅಖಿಳ ವೇದಾರ್ಥಗಳನು ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ ಯೈದಿದ ಮಧ್ವಮುನಿರಾಯಗಭಿವಂದಿಪೆ
badarikāśramake punarapiyaidi vyāsamuni padakeragi akhiḷa vēdārthagaḷanu padumanābhan mukhadi tiḷidu brahmatva yaidida madhvamunirāyagabhiandidē
Reborn at Badarikāśrama, bowing at the feet of Vyāsa muni, he learned the entire meaning of the Vedas from the mouth of Padmanābha (Viṣṇu) and attained Brahma-jñāna — I bow to that Madhva muni king.

Verse 24 — ಜಯ ಜಯತು ದುರ್ವಾದಿಮತತಿಮಿರ ಮಾರ್ತಾ0ಡ ಜಯಜಯತು…

ಜಯ ಜಯತು ದುರ್ವಾದಿಮತತಿಮಿರ ಮಾರ್ತಾ0ಡ ಜಯಜಯತು ವಾದಿಗಜಪಂಚಾನನ ಜಯಜಯತು ಚಾರ್ವಾಕಗರ್ವಪರ್ವತಕುಲಿಶ ಜಯಜಯತು ಜಗನ್ನಾಥ ಮಧ್ವನಾಥ
jaya jayatu durvādimatatimira mārtāṇḍa jayajayatu vādigajapañcānana jayajayatu cārvākagarvaparvatakuliśa jayajayatu jagannātha madhvanātha
Victory, victory to the sun that destroys the darkness of the Durvāda doctrines! Victory to the five-faced one who defeats the elephant-like debaters! Victory to the thunderbolt that shatters the mountain of Cārvāka pride! Victory, victory to the Lord of the universe, the Lord of Madhva!

Verse 25 — ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ ಭಂಗವಿಲ್ಲದೆ…

ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿ ಭಂಗವಿಲ್ಲದೆ ಸುಖವ ಸುಜನಕೆಲ್ಲ ಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕ ರಂಗವಿಠಲನೆಂದು ನೆರೆ ಸಾರಿರೈ
tuṅgakula guruvrana hṛtkamaladali nilisi bhaṅgavillade sukhuva sujanakella hiṅgade koḍuva namma madhvāntarātmaka raṅgaviṭhalanēndu neṛe sāriraī
Abiding in the lotus-heart of the best guru of the Tunga lineage, unbroken bliss comes to all the good; ceaselessly bestowing grace is our inner self of Madhva — proclaim always that Rāṅga Viṭhala!

Verse ph1 — ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ ಭೂಮಿದೇವರಿಗೆ ಸುರನದಿಯ…

ಸೋಮ ಸೂರ್ಯೋಪರಾಗದಿ ಗೋಸಹಸ್ರಗಳ ಭೂಮಿದೇವರಿಗೆ ಸುರನದಿಯ ತಟದಿ ಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು ಈ ಮಧ್ವನಾಮ ಬರೆದೋದಿದರ್ಗೆ
sōma sūryōparāgadi gōsahasragaḷa bhūmidevarige suranadiya taṭadi śrīmukundārpaṇavenut koṭṭa phalamakku ī madhvanāma barēdōdidarge
By the merit of giving a thousand cows at the conjunction of sun and moon to the Earth Goddess on the banks of the celestial river, offering it to Śrī Mukuṇḍa — to those who write and read this Madhvanāma.

Verse ph2 — ಪುತ್ರರಿಲ್ಲದವರು ಸತ್ಪುತ್ರರೈದುವರು ಸರ್ವತ್ರದಲಿ…

ಪುತ್ರರಿಲ್ಲದವರು ಸತ್ಪುತ್ರರೈದುವರು ಸರ್ವತ್ರದಲಿ ದಿಗ್ವಿಜಯವಹುದು ಸಕಲ ಶತ್ರುಗಳು ಕೆಡುವರಪಮೃತ್ಯು ಬರಲಂಜುವುದು ಸೂತ್ರನಾಮಕನ ಸಂಸ್ತುತಿ ಮಾತ್ರದಿ
putrarilladavaru satputrāriduvaru sarvatradaḷi digvijayavahudu sakala śatruaru keḍuvarapamṛtyu baralañjuvudu sūtranāmakana sanstuti mātradi
Those without sons will obtain virtuous sons; victory in all directions will come; all enemies will perish and untimely death will not approach — by merely praising the one named Sūtra (Madhva).

Verse ph3 — ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ ತಾಪಕಳೆದಖಿಲ…

ಶ್ರೀಪಾದರಾಯ ಪೇಳಿದ ಮಧ್ವನಾಮ ಸಂ ತಾಪಕಳೆದಖಿಲ ಸೌಖ್ಯವನೀವುದು ಶ್ರೀಪತಿ ಜಗನ್ನಾಥವಿಠಲನ ತೋರಿ ಭವ ಕೂಪಾರದಿಂದ ಕಡೆ ಹಾಯಿಸುವುದು
śrīpādarāya pēḷida madhvānāma san tāpakaḷedakhila saukhyavanīvudu śrīpati jagannāthaviṭhalana tōri bhava kūpāradimda kaḍe hāyisuvudu
The Madhvanāma sung by Śrīpādarāya removes all suffering and grants complete happiness; showing the way, it carries one across the well of worldly existence by the grace of Lord Jagannātha Viṭhala.

About Madhwanama

Madhwanama is a Kannada devaranama, composed by Śrī Śrīpādarāja (Śrīpādarāya), addressed to Madhwacharya — a Nama. It is presented here in Devanagari, Roman (IAST), Kannada, each verse with its English meaning. Source text: Vignanam.org (enthusiast blog).

An early Mādhwa pontiff of Mulbagal and a pioneer of the Haridāsa movement, guru of Vyāsatīrtha; among the first to compose Kannada devaranamas, suḷādis and ugābhogas, under the signature 'Raṅga Viṭhala'.

Learn & chant Madhwanama on Avabodhak →

Frequently asked questions

What is Madhwanama and what does it mean?

Madhwanama is a Kannada devaranama (devotional hymn), composed by Śrī Śrīpādarāja (Śrīpādarāya), addressed to Madhwacharya, of 29 verses. On Avabodhak every verse is shown with its English meaning, so you can understand the text line by line as you read.

How do I pronounce Madhwanama correctly?

Avabodhak presents Madhwanama in Devanagari, Roman (IAST), Kannada alongside IAST Roman transliteration that marks every long vowel (ā, ī, ū) and conjunct consonant. Reading the Devanagari text with the IAST line lets you follow the exact pronunciation syllable by syllable, and the guided practice mode replays it line by line.

What is the word-by-word meaning of Madhwanama?

Avabodhak pairs each verse of Madhwanama with its English meaning, and the practice view breaks lines into individual words — so you learn what each word means, not just the overall sense.

Who composed Madhwanama?

Madhwanama is attributed to Śrī Śrīpādarāja (Śrīpādarāya).

In which scripts can I read Madhwanama?

Madhwanama is available in Devanagari, Roman (IAST), Kannada on Avabodhak, each with English meaning and IAST transliteration.

Can I chant or practice Madhwanama online?

Yes — Avabodhak offers a free reading view plus guided practice and word-puzzle modes to help you chant and memorise Madhwanama.